¡Sorpréndeme!

ರಜಿನಿಕಾಂತ್ ರಾಜಕೀಯ ಪ್ರವೇಶ : 25 ವರ್ಷಗಳ ಕನಸು ನನಸು | Oneindia Kannada

2017-12-31 82 Dailymotion

In next assembly elections I will form a party and will contest all constituencies in Tamil Nadu : #Rajinikanth. Thalaiva fans are happy & they say, 25 years dream come true. Watch video.


ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಬಹಿರಂಗ ಪಡಿಸಿದ್ದಾರೆ. ರಜನಿ ರಿಯಲ್ ರಾಜಕೀಯಕ್ಕೆ ಬರುತ್ತಾರಾ.. ಇಲ್ವಾ.. ಎನ್ನುವ ಕುತೂಹಲಕ್ಕೆ ಅಂತು ಈಗ ಉತ್ತರ ಸಿಕ್ಕಿದೆ.ಇಂದು (ಡಿಸೆಂಬರ್ 31) ಚೆನ್ನೈನಲ್ಲಿರುವ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ ರಜಿನಿ ರಾಜಕೀಯಕ್ಕೆ ಬರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ತಾವು ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ಬಗ್ಗೆ ಹೇಳಿದ್ದಾರೆ.ಈ ಹಿಂದೆ ಮೇ ತಿಂಗಳಿನಲ್ಲಿ ರಾಜಕೀಯದ ಬಗ್ಗೆ ಹೇಳಿಕೊಂಡಿದ್ದ ರಜನಿ ಆ ನಂತರ ಮೌನವಾಗಿದ್ದರು. ಡಿಸೆಂಬರ್ 12ಕ್ಕೆ ರಜಿನಿ ಹುಟ್ಟುಹಬ್ಬ ಇದ್ದು ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿದ ರಜನಿ ಇಂದು ರಾಜಕೀಯಕ್ಕೆ ಬರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.ಇದೀಗ ತಲೈವಾ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.